ಅಲೈನ್ಸ್ ಪಿಕ್ಚರ್ಸ್ ಲಾ೦ಛನದಲ್ಲಿ ಬಸವರಾಜ್ ನಿರ್ಮಾಣದ ಬಿ೩ ಲವ್ ಯು ಚಿತ್ರಕ್ಕೆ ಆರ್.ಟಿ.ನಗರದ ಎನ್.ಪಿ. ಫ್ಯಾಕ್ಟರಿಯಲ್ಲಿ ಶ್ರೀಕಿ, ಹರ್ಷಿಕಾ ಪೊಣಚ್ಚ ಅಭಿನಯದಲ್ಲಿ ಸಹಿಸಿಯೋ ಪ್ರೀತಿಯ, ಲೋಕದಾ ಕಿರುಕುಳ, ಲೋಕವು ಸಹಿಸದು ನಿನ್ನೀ ಪರಿಮಳ ಎಂಬ ಗೀತೆಯ ಚಿತ್ರೀಕರಣ ನಡೆಯಿತು. ಈ ಗೀತೆಯನ್ನು ಡಾ|| ವಿ. ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ಘನಶ್ಯಾಂ .ಪಿ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕ- ಮುರಳೀಧರ್, ಸಂಗೀತ- ಅನುಪ್ ಸೀಲಿನ್, ಸಂಕಲನ- ಕೆ.ಎಂ. ಪ್ರಕಾಶ್, ನೃತ್ಯ - ಮುರಳಿ, ಕಲೈ, ಕಲೆ - ಇಸ್ಮಾಯಿಲ್, ಸಾಹಸ - ರಾಮ್ಲಕ್ಷ್ಮಣ್, ತಾರಾಗಣದಲ್ಲಿ ಶ್ರೀಕಿ, ಹರ್ಷಿಕಾ ಪೊಣಚ್ಚ, ವೀಣಾ ಸುಂದರ್ ಮುಂತಾದವರಿದ್ದಾರೆ.